ಒಂದು
ಲಾಲಿ ಹಾಡಲ್ಲಿ ಈ ಸಾಲಿದೆ -
"ಎಲ್ಲರ
ಮಕ್ಕಳಂತೆ ಅಲ್ಲ ಕಣೆ ನನ್ನವ್ವ'
ಅಂತ,
ಹಾಗೇ
ನನ್ನ ಗಂಡ ನಂಗೆ ಸರ್ವ ಶ್ರೇಷ್ಟ.
ನನ್ನಂತಹ
ಒಂದು ಅನಾಥ ಹುಡುಗಿಗೆ ಜೀವನ
ಕೊಟ್ಟು, ನನ್ನ
ಪ್ರತಿ ಖುಶಿಯನ್ನು ತಮ್ಮ ಖುಶಿ
ಅಂತ ಸಂಭ್ರಮಿಸುತ್ತ ಕುಣಿತಾರೆ,
ನನ್ನ
ಪ್ರತಿ ದುಃಖದಲ್ಲು ಅವರು ಕಣ್ಣೀರು
ಹಾಕ್ತಾರೆ, ಅವರು
ಏನೇ ಮಾಡ್ಲಿ, ಇಲ್ಲ
ಏನೇ ಮಾಡೋದಿರ್ಲೀ ನನ್ನ ಅಭಿಪ್ರಾಯಕ್ಕೆ
ಬೆಲೆ ಕೊಡ್ತಾರೆ.
ಮದುವೆ
ಆದ ಮೇಲಿಂದ ಇದುವರೆಗೂ ಒಂದು ಸರ್ತಿ
ಕೂಡ ನಾನು ಅನಾಥೆ ಅನ್ನೋ ಭಾವನೆ
ಬನ್ದಿಲ್ಲ. ದುಃಖ
ಆದಾಗ ತಾಯಿ ಹಾಗೇ,
ನಾನು
ಧೈರ್ಯಗೆಟ್ಟಾಗ ತಂದೆ ಹಾಗೇ,
ದಾರಿ
ಕಾಣದೆ ಇರೋವಾಗ ಗುರು ಹಾಗೇ,
ಸಹನೆಗೆಟ್ಟಾಗ
ಸ್ನೇಹಿತನ ಹಾಗೇ,
ಪ್ರೀತಿ
ಬಯಸಿದಾಗ ಇನಿಯನ ಹಾಗೇ ಪ್ರತಿ
ಕ್ಷಣ ನನ್ನ ಜೊತೆ ಇದ್ದಾರೆ.
ಹಾಗಂತ
ನಮ್ದೇನು ಲವ್ ಮಾಡಿ ಮದುವೆ
ಆಗಿರೋದಲ್ಲ, ಹಿರಿಯರು
ನೋಡಿ ನಿಶ್ಚಯ ಮಾಡಿರೋ ಮದುವೆ.
ಮದುವೆ
ಗೊತ್ತಾದಾಗಿಂದ ಇದುವರೆಗೂ ಒಂದೇ
ರೀತಿ ಮತ್ತು ಅಷ್ಟೇ ಪ್ರೀತಿ
ಮಾಡ್ತಾರೆ. ಅದರಲ್ಲಿ
ಒಂದಿಂಚೂ ಕೂಡ ಕಡಿಮೆಯಾಗಿಲ್ಲ.
ಸಪ್ತಪದಿ
ಅನ್ನೋದು ಏಳು ಜನ್ಮದ ಅನುಬಂಧ
ಅನ್ತಾರೆ. ಆದ್ರೆ
ಈ ನನ್ನ ಮದುವೆ ಜನ್ಮಾನ್ತರದ್ದು
ಅನಿಸುತ್ತೆ.
ನಾನು
ಬಸಿರಾದಾಗಿಂದ ಮಗು ಹುಟ್ಟೊವರೆಗೂ
ನನ್ನ ಗಂಡನಲ್ಲಿ ನಾನು ನನ್ನ ತಾಯಿ
ರೂಪ ಕಂಡಿದ್ದೇನಿ.
ಯಾಕಂದ್ರೆ
ಅವರು ನನ್ನನ್ನು ಮಗು ರೀತಿ ನನ್ನ
ಬೇಕು-ಬೇಡಗಳನ್ನೆಲ್ಲ
ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ.
ಹಾಗಂತ
ಅವರೆಂದು ನನ್ನ ಮೇಲೆ ಕೋಪ
ಮಾಡ್ಕೊಳ್ಳಲ್ಲ ಅಂತೆನೀಲ್ಲ,
ನಾನೇನಾದ್ರು
ತಪ್ಪು ಮಾಡಿದ್ರೆ ಬೇಸರ ಮಾಡ್ಕೋತಾರೆ,
ಮತ್ತೇ
- ಮತ್ತೇ
ಅದೇ ತಪ್ಪು ಮಾಡಿದ್ರೆ ಕಂಡಿತಾ
ಕೋಪ ಬರುತ್ತೇ, ಆದ್ರೆ
ಅದು ಸ್ವಲ್ಪ ಸಮಯ ಮಾತ್ರ.
ರುಚಿಕಟ್ಟಾದ
ಅಡುಗೆಯಲ್ಲಿ ಉಪ್ಪು,
ಹುಳಿ,
ಖಾರ,
ಏನೆಲ್ಲ
ಮಸಾಲೆ ಹೇಗೇ ಸಂಮಿಶ್ರವಾಗಿರುತ್ತೋ
ಹಾಗಿದೇ ನಮ್ಮ ಸಂಸಾರ.
ಭೀಮನ
ಅಮವಾಸ್ಯೆ ಬರ್ತಾ ಇದೆ ಅಂತ ಈ ಮಾತು
ಹೇಳ್ತಾ ಇಲ್ಲ. "ಎಲ್ಲರ
ಗಂಡನಂತೆ ಅಲ್ಲ ಕಣೆ ನನ್ನವ'...