ಬುಧವಾರ, ಜೂನ್ 18, 2014

ಟೈಲರಿಂಗ್ ಕ್ಲಾಸ್

ನಂಗೆ ಮೊದಲಿನಿಂದಲೂ ಟೈಲರಿಂಗ್ ಕಲಿಬೇಕು ಅಂತ ತುಂಬಾನೇ ಆಸೆ ಇತ್ತು..
ಹಲ್ಲು ಇದ್ದವನಿಗೆ ಕಡ್ಲೆ ಇಲ್ಲ, ಕಡ್ಲೆ ಇದ್ದವನಿಗೆ ಹಲ್ಲು ಇಲ್ಲ ಅನ್ನೋ ಹಾಗೇ ನಂಗೆ ಕಲಿಬೇಕು ಅಂತ ಆಸೆ ಇದ್ದಾಗ ಅವಕಾಶ ಸಿಕ್ಕಿರಲಿಲ್ಲ, ಅವಕಾಶ ಇದ್ದಾಗ ನಂಗೆ ಟೈಮ್ ಇರಲಿಲ್ಲ.

ನಂಗೆ ಅವಕಾಶ ಸಿಕ್ಕಾಗ ನನ್ನ ಮದುವೆ ಹತ್ತಿರ ಬಂತು  ಸರಿಯಾಗಿ  ಮತ್ತು ಪೂರ್ತಿಯಾಗಿ  ಕಲಿಲಿಕ್ಕೆ ಆಗಲಿಲ್ಲ. ಮದುವೆ ಆದ ಮೇಲೆ ನನ್ನ ಗಂಡ ಟೈಲರಿಂಗ್ ಕ್ಲಾಸ್ಗೆ ಹೋಗು ಅನ್ನೋ ಟೈಮ್-ಗೆ ನಾನು ಗರ್ಭಿಣಿ ಆದೆ, ಹಾಗಾಗಿ ಆಮೇಲೆ ಕಲಿಯೋಕೆ ಆಗಲಿಲ್ಲ.  ಆಮೇಲೆ ಮಗು ಆಯಿತು, ಬಾಣಂತನ, ಆಮೇಲೆ ಮಗುನ ನೋಡಿಕೊಳ್ಳೋದು, ಇದೆ ಆಯಿತು.

ಇವಾಗ ನನ್ನ ಮಗನಿಗೆ ೯ ತಿಂಗಳು, ಇವಾಗ  ಟೈಲರಿಂಗ್ ಕಲಿಯೋಕೆ ಹೋಗೋಣ ಅಂತ ಗಟ್ಟಿ ನಿರ್ದಾರ ಮಾಡಿದೆ . ಹಾಗೆ ನನ್ನ ಗಂಡನಿಗೂ ಕೇಳಿದೆ,  ನಾನು ಇನ್ನಮೇಲೆ ಬೆಳಗ್ಗೆ ಟೈಲರಿಂಗ್ ಕಲಿಯೋಕೆ ಹೋಗ್ತೇನಿ ಆ ಟೈಮ್-ಲ್ಲಿ ಮಗುನ ನೀವು ನೋಡ್ಕೊತಿರ ಅಂತ ಅದಕ್ಕೆ ಅವ್ರು ಮನಸ್ಸ-ಪೂರ್ವಕವಾಗಿ  ಒಪ್ಪಿದರು.

ಆದ್ರೆ  ಟೈಲರಿಂಗ್ ಎಲ್ಲಿ ಹೇಳಿಕೊಡ್ತಾರೆ ಅಂತ ಹುಡುಕೋದೇ  ದೊಡ್ಡ ಕಷ್ಟ ಆಯಿತು. ಅವರು ಹೇಳಿಕೊಡೋ ಟೈಮ್ ನಂಗೆ ಸರಿ ಹೋಗ್ತಾ ಇರಲಿಲ್ಲ. ನನ್ನ ಗಂಡ ಮನೇಲಿ ಇರೋ ಟೈಮ್-ಲ್ಲಿ ನಾನು ಕಲಿಲಿಕ್ಕೆ ಹೋಗಬೇಕಿತ್ತು, ಅಂತು ಇಂತೂ ವಿಜಯನಗರ-ಹೆಬ್ಬಾಳ ಎಲ್ಲಾ ಕಡೆ ಹುಡ್ಕಿದ್ವಿ, ಆದ್ರೆ ನಮ್ಮ ಮನೆ ಹತ್ರಾನೇ ಕ್ಲಾಸ್ ಇದೆ ಅಂತ ಕೊನೆಗೆ ಗೊತ್ತಾಯಿತು. ಹಾಗಾಗಿ ಇವತ್ತಿನಿಂದ ನನ್ನ ಬಹುದಿನದ ಆಸೆಯ  ಟೈಲರಿಂಗ್ ಕ್ಲಾಸ್ಗೆ ಹೋಗ್ತಾ ಇದ್ದೀನಿ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ