ಬುಧವಾರ, ಜೂನ್ 18, 2014

ಅಮ್ಮ :

ಅಮ್ಮ :
         
             ಜೀವನದಲ್ಲಿ ಏನಾದ್ರು ಕಳಕೊಂಡಾಗ ಅದರ ನಿಜವಾದ ಬೆಲೆ ಗೊತ್ತಾಗೋದು ಅಂತಾರೆ, ಅದೆಷ್ಟು ನಿಜ ಆಲ್ವಾ?.
ಅಮ್ಮ ನೀನೇಕೆ ನನ್ನ ಬಿಟ್ಟು ಹೋದೆ? ನಾನೇನು ಅಷ್ಟೊಂದು ದೊಡ್ಡ ತಪ್ಪು ಮಾಡಿದ್ದೆ? ನೀನು ಇಲ್ಲದೇ ನಾನು ಹೇಗಿರ್ತೆನಿ ಅಂತ ಒಂದು ಸಲವಾದ್ರೂ ನೀನು ಯೋಚನೆ ಮಾಡಿದ್ಯಾ?
        ಅಮ್ಮ ನಾನು ಚಿಕ್ಕವಳಿದ್ದಾಗ ನೀನು ಯಾವಾಗಲು ನನ್ನಿಂದ ದೂರಾನೇ ಇರ್ತಿದ್ದೀ ಹಾಗಾಗೀ ನಾನು ಅಪ್ಪನ್ ತುಂಬಾನೇ ಹಚ್ಚ್ಕೊಂಡಿದ್ದೆ ಇದರಲ್ಲಿ ನಂದು ತಪ್ಪಿದೆನಾ ಅಮ್ಮ?
ಮಕ್ಕಳಿಗೆ ಯಾರು ಪ್ರೀತಿ ತೋರಿಸ್ತಾರೋ ಅವರನ್ನೇ ಇಷ್ಟ ಪಡ್ತಾರಂತೆ, ಹಾಗೇ ನಾನು ಇದ್ದೇ, ಅದು ತಪ್ಪ?
         ಅಮ್ಮ ನಂಗೆ ನಿನ್ನ ಅವಶ್ಯಕತೆ ತುಂಬಾನೇ ಇದೆ. ನಿನ್ನ ಮಡಿಲಲ್ಲಿ ನಾನು ತಲೆ ಇಟ್ಟು ಮಲ್ಗ್ಬೇಕು ಅಂತ ಅನಿಸ್ತಿದೆ, ನಿನ್ನ ಸೀರೆ ಸೆರಗಲ್ಲಿ ನನ್ನ ಮೂಖ ಮುಚ್ಚ್ಕೊಬೇಕು ಅನಿಸ್ತಿದೆ, ನಿನ್ನ ಕೈ ತುತ್ತು ತಿನ್ನಬೇಕು ಅಂತ ಆಸೆ ಆಗ್ತಿದೆ, ನಿನ್ನ ಹತ್ತಿರ ನನ್ನ ಮನಸ್ಸಿನ ನೋವನ್ನೆಲ್ಲ ಹೇಳ್ಕೋಬೇಕು ಅಂತ ಅನಿಸ್ತಿದೆ, ನಾನು ನಡಿತಿರೋ ದಾರಿ ಸರಿಯೋ - ತಪ್ಪೋ ಅಂತ ಕೇಳಬೇಕು ಅಂತ ಅನಿಸ್ತಿದೆ, ನನ್ನ ಗಂಡ - ಮಗುನ ನಿಂಗೆ ತೋರಿಸ್ಬೇಕು ಅಂತ ಅನಿಸ್ತಿದೆ, ನನ್ನ ಸಂಸಾರ - ನಮ್ಮ  ಜೋಡಿ ಹೇಗಿದೆ ಅಂತ ನಿನ್ನ ಬಾಯಿಂದ ಕೇಳ್ಬೇಕು ಅಂತ ಅನಿಸ್ತಿದೆ, ನನ್ನ ಮಗು ನಿನ್ನ ಅಜ್ಜಿ ಅನ್ನೋದನ್ನ ಕೇಳಬೇಕು ಅಂತ ಅನಿಸ್ತಿದೆ, ನೀನು ಅಜ್ಜಿ ಆದಾಗ ಹೇಗೆ ಕಾಣಿಸ್ತಿಯ ಅಂತ ನೋಡ್ಬೇಕು ಅನಿಸ್ತಿದೆ, ಒಟ್ಟ್ನಲ್ಲಿ ನಿನ್ನ ಹತ್ತಿರ ಬಯ್ಯ್ಸೀಕೊಳ್ಳೊಕ್ಕಾದ್ರು ನೀನು ನಂಗೆ ಬೇಕಮ್ಮ.
       ಅಮ್ಮ  ಎಲ್ಲರೂ ಭೂಮಿನ ತಾಯಿಗೆ ಹೊಲಿಸ್ತಾರೆ, ಆದ್ರೆ ನಾನು ನನ್ನ ತಾಯಿನ ಭೂಮಿಗೆ ಹೋಲಿಸ್ತೇನಿ.  ನೀನು ಸಹನೆಯಲ್ಲಿ  ಭೂಮಿ, ಪ್ರೀತಿಯಲ್ಲಿ ಭೂಮಿ.  ಹಾಗೇ  ನೀನು ನನ್ನ ನೆನಪಲ್ಲೂ ಭೂಮಿ,(ನಿನ್ನ ನೆನೆಪು ಭೂಮಿ ಹಾಗೇ ವಿಶಾಲ ಅದಕ್ಕೆ ಕೊನೆನೀ ಇಲ್ಲ).
       ಅಮ್ಮ ನೀನು ಯಾವುದಾದ್ರು ರೂಪದಲ್ಲಿ ನನ್ನ ಹತ್ತಿರ ಬಾಮ್ಮ. ನನ್ನ ಜೊತೇನೆ ಇರು. ನನ್ನ ಎಂದೂ ಬಿಟ್ಟು ಹೋಗ್ಬೇಡ. ನಿನ್ನ ಪ್ರಿತಿಗಾಗಿ ಕಾಯ್ತಾ ಇರ್ತೇನೀ ಯಾವಾಗ್ಲು....  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ