ಶುಕ್ರವಾರ, ಜೂನ್ 20, 2014

ನನ್ನಪ್ಪ...

ನನ್ನಪ್ಪ:
     ಅಪ್ಪಂದಿರ ದಿನ ಬಂತು, ಎಲ್ಲರಿಗೂ ಅಪ್ಪ ಅಂದ್ರೆ ತುಂಬಾ ವಿಶೇಷ.  ನಂಗು ಕೂಡ. ಆದ್ರೆ ನಾನು ಅವರ ಜೊತೆ ಕಳೆದ ಕ್ಷಣ ಕಡಿಮೆ ಇದ್ದರೂ ಅವರ ಪ್ರೀತಿ ನಂಗೆ ಅಪಾರವಾಗಿ ಸಿಕ್ಕಿದೆ. ನಾನು೮ ವರ್ಷ ಇದ್ದಾಗ ಅಪ್ಪ-ಅಮ್ಮನ್ನ ಕಳ್ಕೊಂಡೆ. ಆದ್ರೆ ಅವರ ನೆನಪು ನನ್ನ ಮನಸಲ್ಲಿ ಅಚ್ಚಳಿಸದೇ ಉಳಿದಿದೆ. ಆ ಮುದ್ದು ನೆನಪನ್ನ ನಿಮ್ಮ ಜೊತೆ ಹಂಚ್ಕೊತಾ ಇದ್ದೀನಿ. 
             ನಾನು ನನ್ನಪ್ಪನಿಗೆ ತುಂಬಾ ಮುದ್ದಿನ ಒಬ್ಬಳೇ ಮಗಳು, ಅದರಲ್ಲಂತು ನನ್ನಪ್ಪನಿಗೆ ನಾನು ಅಂದ್ರೆ ಪಂಚಪ್ರಾಣ. ನನ್ನ ಅಮ್ಮ ದೊಡ್ಡ ಸಂಸಾರದ ದೊಡ್ಡ ಸೊಸೆ ಆಗಿದ್ರಿಂದ ಮನೆಯ ಎಲ್ಲ ಜವಾಬ್ದಾರಿ ನನ್ನಮ್ಮನ್ದೆ. ನಾದಿನಿಯರ ಮದುವೆ, ಬಾಣಂತನ  ಇದರಲ್ಲಿಯೇ ನನ್ನಮ್ಮ ಕಳೆದುಹೋದ್ರು. ಹಾಗಾಗೀ  ನಂಗು ನನ್ನಪ್ಪನಿಗೂ ಅವಿನಾಭಾವ ಸಂಬಂಧ. ನಂಗೆ ಒಂದು ರೀತಿ ಅಮ್ಮ, ಅಪ್ಪ ಎಲ್ಲ ಅವರೇ ಆಗಿದ್ರೂ. 
       ಅವರೇ ನಂಗೆ ಸ್ನಾನ, ಊಟ ಎಲ್ಲ  ಮಾಡಿಸಬೇಕು. ಒಂದು ದಿನ ಕೂಡ ನಾನು ಕಥೆ ಕೇಳದೆ ಮಲಗೇ ಇಲ್ಲ. ಒಂದು ದಿನ ಅಂತು ನನ್ನಪ್ಪ ಎಲ್ಲಿಗೋ  ಹೊರಗೆ ಹೋಗಿದ್ರು, ಹಾಗಾಗಿ ನನ್ನಮ್ಮ ಬಲವಂತದಲ್ಲಿ ನನ್ನ ತಲೆಗೆ ಎಣ್ಣೆ ಹಾಕಿ ನಿನ್ನಪ್ಪ ಬಂದ ಮೇಲೆ ಅವರೇ ಸ್ನಾನ ಮಾಡಿಸ್ತಾರೆ ಅಂತ ಹೇಳಿದ್ದವರು, ನಂಗೆ ನಿದ್ದೆ ಬರ್ತಾ ಇದೆ ಅನ್ನೋ ಕಾರಣಕ್ಕೆ ಅವ್ರೆ ನಂಗೆ ಸ್ನಾನ ಮಾಡಿಸೋಕ್ಕೆ ಬಚ್ಚಲು ಮನೆಗೇ ಕರ್ಕೊಂಡೋಗಿ ನೀರು ಹಾಕೋಕೆ ಶುರು ಮಾಡಿದ್ರು, ಆದ್ರೆ ನಾನು ಅಲ್ಲಿದ್ದ ಟವೆಲ್ ಸುತ್ತ್ಕೊಂಡು ನನ್ನಪ್ಪನ್ನ  ಹುಡ್ಕೊಂಡು ಹೋಗಿದ್ದೆ. ಅವಾಗ ನಂಗೆ ೬ ವರ್ಷ.
     ನಾನು ನನ್ನಪ್ಪ ಬರೋ ತನಕ ಊಟ ಮಾಡ್ತಾ ಇರಲಿಲ್ಲ. ಕೆಲವು ಸಲ  ನನ್ನಪ್ಪ ಮನೆಗೆ ಬರೋದು ತಡ ಆದ್ರೆ ನಂಗೆ ಎಲ್ಲಿ ನಿದ್ರೆ ಬರುತ್ತೋ ಅಂತ ನನ್ನಮ್ಮ ಏನೇನೋ ಕಥೆ ಹೇಳಿ, ಆಟ ಆಡಿಸಿ ಪಾಪ ಊಟ ಮಾಡಿಸ್ತಿದ್ರು. ಆದ್ರೆ ನನ್ನಪ್ಪ ಬಂದ  ಮೇಲೆ ಎಷ್ಟೇ ನಿದ್ರೆ ಮಾಡ್ತಿದ್ರು ಕೂಡಾ ನಾನು ಎದ್ದು ನನ್ನಪ್ಪನ ಜೊತೆ ಒಂದು ತುತ್ತಾದರೂ ತಿನ್ನಲೆಬೇಕು.
ಒಂದು ಸಲ ನಾನು ಶಾಲೆ ಇಂದ ಬರುವಾಗ ಜೋರು ಮಳೆ..  ನನ್ನಪ್ಪ ತಮ್ಮೆಲ್ಲಾ ಕೆಲಸ ಬಿಟ್ಟು, ಕೊಡೆ ಹಿಡ್ಕೊಂಡು ನನ್ನ ಶಾಲೆ ಹತ್ರ ಬಂದಿದ್ರು, ನನ್ನನ್ನು ತಮ್ಮ ಹೆಗಲ ಮೇಲೆ ಕೂಡಿಸ್ಕೊಂಡು ಮನೆಗೆ ಕರ್ಕೊಂಡು ಬನ್ದ್ರು. ನನ್ನ ಒಂದು ದಿನ ಕೂಡ ಬಿಟ್ಟು ಇರ್ತಿರ್ಲಿಲ್ಲ. ಆದ್ರೆ ನಂಗೆ ಹೇಳದೆ ತುಂಬಾನೇ ದೂರ ಹೋದ್ರು.
   ಅಪ್ಪ ನಂಗೆ ನಿಮ್ಮ ನೆನಪು ತುಂಬಾನೇ ಆಗುತ್ತೇ. ನಂಗೆ ಮತ್ತೆ ನಿಮ್ಮ ಮಡಿಲಲ್ಲಿ ಮಲಗ್ಬೇಕು ಅನಿಸುತ್ತೆ. ನಿಮಗೆ ಒಂದು ಸಿಹಿ ಸುದ್ದಿ ಹೇಳ್ಬೇಕು - ನಾನು, ನಿಮ್ಮ ಪುಟಾಣಿ ಮಗಳು - ಈವಾಗ ಒಂದು ಪುಟ್ಟ ಮಗನಿಗೆ ಅಮ್ಮ ಆಗಿದ್ದೇನೆ. ನಿಮ್ಮ ಮಗಳ ಮೇಲಿನ ಪ್ರೀತಿಯಿಂದ ನೀವೇ ಇವನ ರೂಪದಲ್ಲಿ ವಾಪಸ್ಸು ಬಂದಿದ್ದೀರಾ ಅನ್ನಿಸ್ತಿದೆ.. ಹೌದಲ್ವ ಪಪ್ಪಾ...  

ಬುಧವಾರ, ಜೂನ್ 18, 2014

ಅಮ್ಮ :

ಅಮ್ಮ :
         
             ಜೀವನದಲ್ಲಿ ಏನಾದ್ರು ಕಳಕೊಂಡಾಗ ಅದರ ನಿಜವಾದ ಬೆಲೆ ಗೊತ್ತಾಗೋದು ಅಂತಾರೆ, ಅದೆಷ್ಟು ನಿಜ ಆಲ್ವಾ?.
ಅಮ್ಮ ನೀನೇಕೆ ನನ್ನ ಬಿಟ್ಟು ಹೋದೆ? ನಾನೇನು ಅಷ್ಟೊಂದು ದೊಡ್ಡ ತಪ್ಪು ಮಾಡಿದ್ದೆ? ನೀನು ಇಲ್ಲದೇ ನಾನು ಹೇಗಿರ್ತೆನಿ ಅಂತ ಒಂದು ಸಲವಾದ್ರೂ ನೀನು ಯೋಚನೆ ಮಾಡಿದ್ಯಾ?
        ಅಮ್ಮ ನಾನು ಚಿಕ್ಕವಳಿದ್ದಾಗ ನೀನು ಯಾವಾಗಲು ನನ್ನಿಂದ ದೂರಾನೇ ಇರ್ತಿದ್ದೀ ಹಾಗಾಗೀ ನಾನು ಅಪ್ಪನ್ ತುಂಬಾನೇ ಹಚ್ಚ್ಕೊಂಡಿದ್ದೆ ಇದರಲ್ಲಿ ನಂದು ತಪ್ಪಿದೆನಾ ಅಮ್ಮ?
ಮಕ್ಕಳಿಗೆ ಯಾರು ಪ್ರೀತಿ ತೋರಿಸ್ತಾರೋ ಅವರನ್ನೇ ಇಷ್ಟ ಪಡ್ತಾರಂತೆ, ಹಾಗೇ ನಾನು ಇದ್ದೇ, ಅದು ತಪ್ಪ?
         ಅಮ್ಮ ನಂಗೆ ನಿನ್ನ ಅವಶ್ಯಕತೆ ತುಂಬಾನೇ ಇದೆ. ನಿನ್ನ ಮಡಿಲಲ್ಲಿ ನಾನು ತಲೆ ಇಟ್ಟು ಮಲ್ಗ್ಬೇಕು ಅಂತ ಅನಿಸ್ತಿದೆ, ನಿನ್ನ ಸೀರೆ ಸೆರಗಲ್ಲಿ ನನ್ನ ಮೂಖ ಮುಚ್ಚ್ಕೊಬೇಕು ಅನಿಸ್ತಿದೆ, ನಿನ್ನ ಕೈ ತುತ್ತು ತಿನ್ನಬೇಕು ಅಂತ ಆಸೆ ಆಗ್ತಿದೆ, ನಿನ್ನ ಹತ್ತಿರ ನನ್ನ ಮನಸ್ಸಿನ ನೋವನ್ನೆಲ್ಲ ಹೇಳ್ಕೋಬೇಕು ಅಂತ ಅನಿಸ್ತಿದೆ, ನಾನು ನಡಿತಿರೋ ದಾರಿ ಸರಿಯೋ - ತಪ್ಪೋ ಅಂತ ಕೇಳಬೇಕು ಅಂತ ಅನಿಸ್ತಿದೆ, ನನ್ನ ಗಂಡ - ಮಗುನ ನಿಂಗೆ ತೋರಿಸ್ಬೇಕು ಅಂತ ಅನಿಸ್ತಿದೆ, ನನ್ನ ಸಂಸಾರ - ನಮ್ಮ  ಜೋಡಿ ಹೇಗಿದೆ ಅಂತ ನಿನ್ನ ಬಾಯಿಂದ ಕೇಳ್ಬೇಕು ಅಂತ ಅನಿಸ್ತಿದೆ, ನನ್ನ ಮಗು ನಿನ್ನ ಅಜ್ಜಿ ಅನ್ನೋದನ್ನ ಕೇಳಬೇಕು ಅಂತ ಅನಿಸ್ತಿದೆ, ನೀನು ಅಜ್ಜಿ ಆದಾಗ ಹೇಗೆ ಕಾಣಿಸ್ತಿಯ ಅಂತ ನೋಡ್ಬೇಕು ಅನಿಸ್ತಿದೆ, ಒಟ್ಟ್ನಲ್ಲಿ ನಿನ್ನ ಹತ್ತಿರ ಬಯ್ಯ್ಸೀಕೊಳ್ಳೊಕ್ಕಾದ್ರು ನೀನು ನಂಗೆ ಬೇಕಮ್ಮ.
       ಅಮ್ಮ  ಎಲ್ಲರೂ ಭೂಮಿನ ತಾಯಿಗೆ ಹೊಲಿಸ್ತಾರೆ, ಆದ್ರೆ ನಾನು ನನ್ನ ತಾಯಿನ ಭೂಮಿಗೆ ಹೋಲಿಸ್ತೇನಿ.  ನೀನು ಸಹನೆಯಲ್ಲಿ  ಭೂಮಿ, ಪ್ರೀತಿಯಲ್ಲಿ ಭೂಮಿ.  ಹಾಗೇ  ನೀನು ನನ್ನ ನೆನಪಲ್ಲೂ ಭೂಮಿ,(ನಿನ್ನ ನೆನೆಪು ಭೂಮಿ ಹಾಗೇ ವಿಶಾಲ ಅದಕ್ಕೆ ಕೊನೆನೀ ಇಲ್ಲ).
       ಅಮ್ಮ ನೀನು ಯಾವುದಾದ್ರು ರೂಪದಲ್ಲಿ ನನ್ನ ಹತ್ತಿರ ಬಾಮ್ಮ. ನನ್ನ ಜೊತೇನೆ ಇರು. ನನ್ನ ಎಂದೂ ಬಿಟ್ಟು ಹೋಗ್ಬೇಡ. ನಿನ್ನ ಪ್ರಿತಿಗಾಗಿ ಕಾಯ್ತಾ ಇರ್ತೇನೀ ಯಾವಾಗ್ಲು....  

ಟೈಲರಿಂಗ್ ಕ್ಲಾಸ್

ನಂಗೆ ಮೊದಲಿನಿಂದಲೂ ಟೈಲರಿಂಗ್ ಕಲಿಬೇಕು ಅಂತ ತುಂಬಾನೇ ಆಸೆ ಇತ್ತು..
ಹಲ್ಲು ಇದ್ದವನಿಗೆ ಕಡ್ಲೆ ಇಲ್ಲ, ಕಡ್ಲೆ ಇದ್ದವನಿಗೆ ಹಲ್ಲು ಇಲ್ಲ ಅನ್ನೋ ಹಾಗೇ ನಂಗೆ ಕಲಿಬೇಕು ಅಂತ ಆಸೆ ಇದ್ದಾಗ ಅವಕಾಶ ಸಿಕ್ಕಿರಲಿಲ್ಲ, ಅವಕಾಶ ಇದ್ದಾಗ ನಂಗೆ ಟೈಮ್ ಇರಲಿಲ್ಲ.

ನಂಗೆ ಅವಕಾಶ ಸಿಕ್ಕಾಗ ನನ್ನ ಮದುವೆ ಹತ್ತಿರ ಬಂತು  ಸರಿಯಾಗಿ  ಮತ್ತು ಪೂರ್ತಿಯಾಗಿ  ಕಲಿಲಿಕ್ಕೆ ಆಗಲಿಲ್ಲ. ಮದುವೆ ಆದ ಮೇಲೆ ನನ್ನ ಗಂಡ ಟೈಲರಿಂಗ್ ಕ್ಲಾಸ್ಗೆ ಹೋಗು ಅನ್ನೋ ಟೈಮ್-ಗೆ ನಾನು ಗರ್ಭಿಣಿ ಆದೆ, ಹಾಗಾಗಿ ಆಮೇಲೆ ಕಲಿಯೋಕೆ ಆಗಲಿಲ್ಲ.  ಆಮೇಲೆ ಮಗು ಆಯಿತು, ಬಾಣಂತನ, ಆಮೇಲೆ ಮಗುನ ನೋಡಿಕೊಳ್ಳೋದು, ಇದೆ ಆಯಿತು.

ಇವಾಗ ನನ್ನ ಮಗನಿಗೆ ೯ ತಿಂಗಳು, ಇವಾಗ  ಟೈಲರಿಂಗ್ ಕಲಿಯೋಕೆ ಹೋಗೋಣ ಅಂತ ಗಟ್ಟಿ ನಿರ್ದಾರ ಮಾಡಿದೆ . ಹಾಗೆ ನನ್ನ ಗಂಡನಿಗೂ ಕೇಳಿದೆ,  ನಾನು ಇನ್ನಮೇಲೆ ಬೆಳಗ್ಗೆ ಟೈಲರಿಂಗ್ ಕಲಿಯೋಕೆ ಹೋಗ್ತೇನಿ ಆ ಟೈಮ್-ಲ್ಲಿ ಮಗುನ ನೀವು ನೋಡ್ಕೊತಿರ ಅಂತ ಅದಕ್ಕೆ ಅವ್ರು ಮನಸ್ಸ-ಪೂರ್ವಕವಾಗಿ  ಒಪ್ಪಿದರು.

ಆದ್ರೆ  ಟೈಲರಿಂಗ್ ಎಲ್ಲಿ ಹೇಳಿಕೊಡ್ತಾರೆ ಅಂತ ಹುಡುಕೋದೇ  ದೊಡ್ಡ ಕಷ್ಟ ಆಯಿತು. ಅವರು ಹೇಳಿಕೊಡೋ ಟೈಮ್ ನಂಗೆ ಸರಿ ಹೋಗ್ತಾ ಇರಲಿಲ್ಲ. ನನ್ನ ಗಂಡ ಮನೇಲಿ ಇರೋ ಟೈಮ್-ಲ್ಲಿ ನಾನು ಕಲಿಲಿಕ್ಕೆ ಹೋಗಬೇಕಿತ್ತು, ಅಂತು ಇಂತೂ ವಿಜಯನಗರ-ಹೆಬ್ಬಾಳ ಎಲ್ಲಾ ಕಡೆ ಹುಡ್ಕಿದ್ವಿ, ಆದ್ರೆ ನಮ್ಮ ಮನೆ ಹತ್ರಾನೇ ಕ್ಲಾಸ್ ಇದೆ ಅಂತ ಕೊನೆಗೆ ಗೊತ್ತಾಯಿತು. ಹಾಗಾಗಿ ಇವತ್ತಿನಿಂದ ನನ್ನ ಬಹುದಿನದ ಆಸೆಯ  ಟೈಲರಿಂಗ್ ಕ್ಲಾಸ್ಗೆ ಹೋಗ್ತಾ ಇದ್ದೀನಿ!

ಶುಕ್ರವಾರ, ಜೂನ್ 13, 2014

ನಾನು ಮತ್ತು ನನ್ಮಗ



ನನ್ನ ಪತಿ ದೇವರನ್ನು ಆಫೀಸಿಗೆ ಕಳಿಸಿದ ಮೇಲೆ, ನಾನು ನನ್ನ ಮಗ ಇದು ನನ್ನ್ ಪುಟ್ ಪ್ರಪಂಚ.
ಆದರೆ ಅದಕ್ಕಿ೦ತ ಬೇರೆ ಸ್ವರ್ಗ ಮತ್ತೊನ್ದಿಲ್ಲ.
ಅವನ ಬಾಲ್ಯ್ ಲೀಲೆಗಳನ್ನು ಸವಿಯುವುದೇ ನನಗೆ ಮಹಾನ್ ಕಾರ್ಯ.
ಮುದ್ದು ಮುದ್ದಾಗಿ ಅಮ್ಮ್-ಅಮ್ಮ್..ಮ್ಮ್.. ಮ್ಮ್ ಅ೦ದುಕೊ೦ಡು ತನ್ನ್ ಪುಟ್ ತುಟಿಯಿ೦ದ ಮುದ್ದಾದ ಮುತ್ತು ಕೊಡ್ತಾ, ಈಡೀ ಮನೆಯೆಲ್ಲಾ ಅ೦ಬೆಗಾಲು ಇಡ್ತಾ, ಹಸಿವೆ ಆದಾಗ ಏ ವು೦ಗಿ ಅ೦ತಾ, ಅವನ ಅಜ್ಜಿ-ತಾತನ ಜೊತೆ ಮುದ್ದಾದ ಆಟ ಅಡ್ಕೊಂಡು, ಅವನೀಗೆ ಊಟ ಮಾಡ್ಸೋವಾಗ ಅನ್ನಾನ ನನ್ನ್ ಇಡೀ ಮೈಗೆ ಬಳೆದು ಅವನು ಮಜಾ ತಗೋತಾನೆ.
ಅವನಿಗೆ ಎಷ್ಟು ಸಲ ಸ್ನಾನ ಮಾಡಿಸ್ತೇನೋ ಅಷ್ಟು ಸಲ ನಾನು ಕೂಡ ಸ್ನಾನ ಮಾಡ್ಬೇಕು.
ಇಡೀ ರೂಮು-ಮಂಚವನ್ನು ನಾನು ನನ್ನ್ ಮಗ ಆಕ್ರಮಿಸಿಕೊಂಡಿರುತ್ತೇವೆ. ಮಂಚದ ಈ ತುದಿಯಿನ್ದ ಆ ತುದಿಯವರೆಗೆ ನಾನು, ನನ್ನ್ ಮಗನ ಉರುಳ್ಸೇವೆ ...
ನನ್ನ್ ಮಗನ ಕಣ್ ತಪ್ಪಿಸಿ ಯಾವ ಕೆಲಸ ಮಾಡೋ ಹಾಗೇ ಇಲ್ಲ್, ನಾನೂ ಎಲ್ಲೇ ಇದ್ದ್ರು ನನ್ನ ಹುಡುಕಿಕೊಂಡು ಬರ್ತಾನೆ.
ಅವನೀಗೆ ಬೇಜಾರ್ ಆದ್ರೆ ಬೂ ಬೂ... ಕರ್ಕೊಂಡು ಹೋಗು ಅ೦ತಾ ಹಟ ಮಾಡ್ತಾನೆ. ಕರ್ಕೊಂಡು ಹೋದ್ರೆ ಈಡೀ ಬೀದಿ ಜನಾನ ಮಾತನಾಡ್ಸಬೇಕು.
ಅವನಿ೦ದಾಗಿ ಈಡೀ ಬೀದಿ ಜನಾ ನನಗೆ ಪರಿಚಯ ಆಗಿದ್ದಾರೆ.ನನ್ನ್ ಮಗನ ದೆಸೆಯಿ೦ದ ಎಷ್ಟೋ ಜನಾ ನನಗೆ ಒಳ್ಳೆಯ ಫ್ರೆ೦ಡ್ಸ್ ಆಗಿದ್ದಾರೆ.
ಆಮೇಲೆ ಮನೆಗೆ ಬನ್ದು ಮತ್ತೆ ಅವನಿಗೆ ಊಟ ಮಾಡಿಸಿ ಮಲಗಿಸೋ ಕಾರ್ಯಕ್ರಮ. ಮತ್ತೆ ಕೋಳಿ ಕೂಗೋದನ್ನ್ ಕಾಯೋದು ನನ್ನ್ ಮುನ್ದಿನ ಕೆಲಸ.
 ಮಕ್ಕಳನ್ನು ದೇವರು ಅನ್ನುತ್ತಾರೆ, ಆದರೆ ನನ್ನ್ ಮಗ ನನಗೆ ದೇವರು, ಗುರು ಎಲ್ಲ ಆಗೀದ್ದಾನೆ.
ನನ್ನ್ ಮಗನಿ೦ದಾಗಿ ನಾನು ಹಾಡೋದನ್ನ್ ಶುರು ಮಾಡಿದೆ, ಅವನ ಜೊತೆ ಕುಣಿಯುವುದನ್ನು ಶುರು ಮಾಡಿದೆ.

ಇದಕ್ಕಿ೦ತ ಇನ್ನೇನು ಬೇಕು ನಂಗೆ...